ನಗರದಲ್ಲಿಂದು ಸುಟ್ಟಗಾಯಗಳಿಗಾಗಿ ಕೆಆರ್ ಆಸ್ಪತ್ರೆ ಆವರಣದಲ್ಲೇ ನಿರ್ಮಿಸಲಾಗಿರುವ ನೂತನ ಕಟ್ಟಡವನ್ನು ಲೋಕಾರ್ಪಣೆ ಮಾಡಿದ ಸಿದ್ದರಾಮಯ್ಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತಾಡಿದರು. ಕೆಅರ್ ಆಸ್ಪತ್ರೆಗೆ ಕಾಯಕಲ್ಪ ಒದಗಿಸುವ ಬಗ್ಗೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಿದ್ದರಾಮಯ್ಯ, ಆಸ್ಪತ್ರೆಯನ್ನು ಉನ್ನತೀಕರಣಗೊಳಿಸುವ (upgrade ) ಕೆಲಸ ಸದಾ ಜಾರಿಯಲ್ಲಿದೆ ಎಂದು ಹೇಳಿದರು.