ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ವಿರುದ್ಧ ವಿಧಾನ ಪರಿಷತ್ನಲ್ಲಿ ಅಶ್ಲೀಲ ಪದ ಬಳಸಿದ ಆರೋಪ ಮತ್ತು ತತ್ಸಂಬಂಧ ದೂರಿನ ಅನ್ವಯ ಸಿಟಿ ರವಿಯವರನ್ನು ಬಂಧಿಸಲಾಗಿದೆ. ಪೊಲೀಸ್ ಕಸ್ಟಡಿಯಲ್ಲಿ ತನ್ನ ತಲೆಗೆ ರಕ್ತ ಸುರಿಯುವಂಥ ಪೆಟ್ಟಾಗಿದೆ ಎಂದು ರವಿ ತಮ್ಮ ಎಕ್ಸ್ ಹ್ಯಾಂಡಲ್ನಲ್ಲಿ ಹೇಳಿಕೊಂಡಿದ್ದು, ಬೆಂಗಳೂರಿಗೆ ಶಿಫ್ಟ್ ಮಾಡಿಸುವ ನೆಪದಲ್ಲಿ ಪೊಲೀಸರು ತನ್ನನ್ನು 3-4 ತಾಸು ಬೆಳಗಾವಿಯಲ್ಲೇ ಸುತ್ತಾಡಿಸಿದ್ದಾರೆ ಎಂದಿದ್ದಾರೆ.