ನಾನು ಈ ಮಟ್ಟಕ್ಕೆ ಬೆಳೆಯಲು ಡಿಕೆ ಶಿವಕುಮಾರ್ ಕಾರಣ: ಬಿಜೆಪಿ ಶಾಸಕ ಎಸ್​ಟಿ ಸೋಮಸೇಖರ್

ಬೆಂಗಳೂರು, ಆಗಸ್ಟ್ 14: ನಾನು ಈ ಮಟ್ಟಕ್ಕೆ ಬೆಳೆಯಲು ನೂರಕ್ಕೆ ನೂರರಷ್ಟು ಡಿ.ಕೆ.ಶಿವಕುಮಾರ್ ಕಾರಣ ಎಂದು ಬಿಜೆಪಿ ಶಾಸಕ ಎಸ್​.ಟಿ.ಸೋಮಶೇಖರ್ ಹೇಳಿದ್ದಾರೆ. ಕೆಂಪೇಗೌಡ ಬಡಾವಣೆ ವೀಕ್ಷಣೆ ವೇಳೆ ಡಿಸಿಎಂ ಅವರನ್ನು ಹೊಗರಳಿದ ಸೋಮಶೇಖರ್, ಸಹಕಾರ ಕ್ಷೇತ್ರದಲ್ಲಿ ಬೆಳೆಯಲು ನನ್ನ ಗುರು ಡಿ.ಕೆ.ಶಿವಕುಮಾರ್​ ಕಾರಣ. ಉತ್ತರಹಳ್ಳಿ ಕ್ಷೇತ್ರದ ಶಾಸಕ ಆಗಬೇಕೆಂದು ನನ್ನ ಹೆಸರು ಘೋಷಿಸಿದ್ದರು. ಆಗ ನನ್ನನ್ನು ಅಭ್ಯರ್ಥಿಯಾಗಿ ಘೋಷಣೆ ಮಾಡಿದ್ದು ಡಿ.ಕೆ.ಶಿವಕುಮಾರ್​. ಅವರ ಶ್ರಮದಿಂದ ನಾನು ಇಂತಹ ವೇದಿಕೆಯಲ್ಲಿ ಮಾತನಾಡುತ್ತಿದ್ದೇನೆ. ಡಿ.ಕೆ.ಶಿವಕುಮಾರ್​ ಮೇಲೆ ಬೆಂಗಳೂರಿನ ಜನ ವಿಶ್ವಾಸ ಇಟ್ಟಿದ್ದಾರೆ. ಅದರಂತೆ ಅವರು ಕೆಲಸ ಮಾಡುತ್ತಿದ್ದಾರೆ ಎಂದರು.