ನಟಿ ಸಂಗೀತಾ ಶೃಂಗೇರಿ ಅವರು ‘ಬಿಗ್ ಬಾಸ್ ಕನ್ನಡ ಸೀಸನ್ 10’ ಶೋನಲ್ಲಿ ಹೆಚ್ಚು ಹೈಲೈಟ್ ಆಗುತ್ತಿದ್ದಾರೆ. ಕಾರ್ತಿಕ್ ಮಹೇಶ್ ಜೊತೆಗಿನ ಅವರ ಒಡನಾಟ ಮತ್ತು ಜಗಳದ ಬಗ್ಗೆ ವೀಕ್ಷಕರು ಚರ್ಚೆ ಮಾಡುತ್ತಿದ್ದಾರೆ. ದಿನದಿಂದ ದಿನಕ್ಕೆ ಕಾರ್ತಿಕ್ ಹಾಗೂ ಸಂಗೀತಾ ನಡುವಿನ ಮನಸ್ತಾಪ ಹೆಚ್ಚಾಗುತ್ತಲೇ ಇದೆ. ಕಾರ್ತಿಕ್ ತಲೆ ಬೋಳಿಸಿಕೊಂಡ ಬಳಿಕ ಸಂಗೀತಾಗೆ ಪಶ್ಚಾತ್ತಾಪ ಕಾಡಿದೆ. ‘ನಾನಲ್ಲದೇ ಬೇರೆ ಯಾರೋ ಆಗುತ್ತಿದ್ದೇನೆ ಎನಿಸುತ್ತಿದೆ. ಇದು ನಾನಲ್ಲ’ ಎಂದು ಸಂಗೀತಾ ಅತ್ತಿದ್ದಾರೆ. ಅವರನ್ನು ಸಮಾಧಾನ ಮಾಡಲು ಕಾರ್ತಿಕ್ ಪ್ರಯತ್ನಿಸಿದ್ದಾರೆ. ಆದರೂ ಅವರ ಜಗಳ ಮುಗಿಯಲೇ ಇಲ್ಲ. ‘ನಾನು ಆಟ ಆಡುವುದಿಲ್ಲ..’ ಎಂದು ಸಂಗೀತಾ ಹೇಳಿದ್ದಾರೆ. ನಂತರದಲ್ಲಿ ಬಿಗ್ ಬಾಸ್ ಮನೆಯ ಮುಖ್ಯ ದ್ವಾರ ಓಪನ್ ಆಗಿದೆ. ಸಂಗೀತಾ ದುಡುಕಿನ ನಿರ್ಧಾರ ಮಾಡಿಬಿಟ್ರಾ ಎಂದು ಎಲ್ಲರಿಗೂ ಅನಿಸಿದೆ. ಈ ಕ್ಷಣದ ಪ್ರೋಮೋ ಬಿಡುಗಡೆ ಆಗಿದೆ. ಅತಿಥಿಯಾಗಿ ಬಂದಿದ್ದ ಬ್ರಹ್ಮಾಂಡ ಗುರೂಜಿ ಅವರನ್ನು ವಾಪಸ್ ಕಳಿಸಲು ಕೂಡ ಬಾಗಿಲು ತೆರೆದಿರಬಹುದು ಎಂದು ವೀಕ್ಷಕರು ಊಹಿಸಿದ್ದಾರೆ. ಅಸಲಿಗೆ ಏನಾಗಿದೆ ಎಂಬುದು ಕಲರ್ಸ್ ಕನ್ನಡದಲ್ಲಿ ನ.22ರ ರಾತ್ರಿ 9.30ಕ್ಕೆ ಪ್ರಸಾರ ಆಗುವ ಎಪಿಸೋಡ್ನಲ್ಲಿ ತಿಳಿಯಲಿದೆ. ಜಿಯೋ ಸಿನಿಮಾದಲ್ಲಿ ದಿನ 24 ಗಂಟೆಯೂ ಲೈವ್ ನೋಡಬಹುದು.