ಕಾರವಾರ: ಹಾವು ಎಂದರೆ ಸಾಕು ಕೆಲವರು ಮಾರು ದೂರ ಓಡಿಹೋಗುತ್ತಾರೆ. ಎಲ್ಲಾದರೂ ಹಾವು ಕಂಡರೇ ಸಾಕು, ಎಷ್ಟೇ ಧೈರ್ಯವಂತರಾದರೂ ಒಂದು ಕ್ಷಣ ಗಾಬರಿಗೊಳ್ಳುವುದು ಸತ್ಯ! ಅಂತದರಲ್ಲಿ ಇಲ್ಲೊಬ್ಬ ಆರು ವರ್ಷದ ಬಾಲಕ ಹಾವಲ್ಲ ಬದಲಿಗೆ 12 ಅಡಿ ಉದ್ದದ ಕಾಳಿಂಗ ಸರ್ಪವನ್ನೇ ಹಿಡಿಯುವ ಮೂಲಕ ಎಲ್ಲರ ಹುಬ್ಬೆರಿಸುವಂತೆ ಮಾಡಿದ್ದಾನೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ತಾಲೂಕಿನ ಜಡ್ಡಿಗದ್ದೆ ಗ್ರಾಮದ ಬಳಿ ಈ ಅಪರೂಪ ಘಟನೆ ಕಂಡುಬಂದಿದೆ.