ಪತಿ-ಪತ್ನಿ ಸಂಬಂಧ ಎಂದರೇ ಹಾಗೆ, ಒಬ್ಬರಿಗೊಬ್ಬರು ಬದುಕಿನುದ್ದಕ್ಕೂ ನೆರವಾಗುತ್ತಾ ಒಟ್ಟಿಗೆ ಜೀವನ ಸಾಗಿಸುವುದು, ಎಷ್ಟೇ ಕಷ್ಟಗಳು, ಸವಾಲುಗಳು ಬರಲಿ ಜತೆಯಾಗಿದ್ದರೆ ಎದುರಿಸುವುದು ಕಷ್ಟವಾಗದು. ಅದಕ್ಕೆ ನಿದರ್ಶನವೆಂಬಂತೆ ಮಹಿಳೆಯೊಬ್ಬರು ಅನಾರೋಗ್ಯದಿಂದ ಬಳಲುತ್ತಿದ್ದರು. ಪತಿ ಜತೆ ಆಸ್ಪತ್ರೆಗೆ ಬಂದಿದ್ದರು. ಈ ವೇಳೆ ವ್ಯಕ್ತಿ ಆಸ್ಪತ್ರೆಯ ವಾರ್ಡ್ನಲ್ಲಿ ತಮ್ಮ ಪತ್ನಿಯ ಕೂದಲು ಬಾಚುತ್ತಿರುವ ವಿಡಿಯೋ ವೈರಲ್ ಆಗಿದೆ.