ಕಳೆದ ವಾರ ಹೆಚ್ ಡಿ ದೇವೇಗೌಡ, ಎಸ್ ಎಂ ಕೃಷ್ಣ, ಬಸವರಾಜ ಬೊಮ್ಮಾಯಿ ಮೊದಲಾದವರನ್ನು ಭೇಟಿಯಾಗಿದ್ದ ವಿಜಯೇಂದ್ರ ಇಂದು ನಾಡಿನ ಖ್ಯಾತ, ಪದ್ಮಭೂಷಣ ಮತ್ತು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ 92-ವರ್ಷ ವಯಸ್ಸಿನ ಸಾಹಿತಿ ಎಸ್ ಎಲ್ ಬೈರಪ್ಪ (SL Bhyrappa) ಅವರನ್ನು ಭೇಟಿಯಾಗಿ ಗೌರವ ಸಲ್ಲಿಸಿದ ಬಳಿಕ ಅವರ ಪಕ್ಕ ಕೂತು ಯೋಗಕ್ಷೇಮ ವಿಚಾರಿಸಿದರು.