ನರ್ಸರಿ ಮಕ್ಕಳಿಂದ ನಾಟಕ ಪ್ರದರ್ಶನ

ಶಾಲೆಯ ಪುಟಾಣಿಗಳು ಭೂಮಿ, ಚಂದ್ರ, ಸೂರ್ಯ, ಪ್ರಗ್ಯಾನ್ ಮೊದಲಾದವುಗಳನ್ನು ಪ್ರತಿಬಿಂಬಿಸುವ ವೇಷಗಳನ್ನು ತೊಟ್ಟು ತಮಗೆ ಶಿಕ್ಷಕಿಯರು ಹೇಳಿಕೊಟ್ಟ ಮಾತುಗಳನ್ನಾಡಿದರು. ಮಕ್ಕಳ ಅಭಿನಯ, ತೊದಲು ನುಡಿಗಳ ಡೈಲಾಗ್ ಡೆಲಿವರಿ ಪೋಷಕರಿಗೆ ಮತ್ತು ಶಾಲಾ ಆವರಣದಲ್ಲಿ ನೆರೆದಿದ್ದ ಜನರ ಮನಸ್ಸಿಗೆ ಮುದನೀಡಿತು.