ಶಾಲೆಯ ಪುಟಾಣಿಗಳು ಭೂಮಿ, ಚಂದ್ರ, ಸೂರ್ಯ, ಪ್ರಗ್ಯಾನ್ ಮೊದಲಾದವುಗಳನ್ನು ಪ್ರತಿಬಿಂಬಿಸುವ ವೇಷಗಳನ್ನು ತೊಟ್ಟು ತಮಗೆ ಶಿಕ್ಷಕಿಯರು ಹೇಳಿಕೊಟ್ಟ ಮಾತುಗಳನ್ನಾಡಿದರು. ಮಕ್ಕಳ ಅಭಿನಯ, ತೊದಲು ನುಡಿಗಳ ಡೈಲಾಗ್ ಡೆಲಿವರಿ ಪೋಷಕರಿಗೆ ಮತ್ತು ಶಾಲಾ ಆವರಣದಲ್ಲಿ ನೆರೆದಿದ್ದ ಜನರ ಮನಸ್ಸಿಗೆ ಮುದನೀಡಿತು.