ಆಗಸದಲ್ಲಿ ಹಾರುತ್ತಿದ್ದ ಸಣ್ಣ ವಿಮಾನವೊಂದು ನೇರವಾಗಿ ರಸ್ತೆಗಿಳಿದಿರುವ ಘಟನೆ ಬ್ರೆಜಿಲ್ನ ದಕ್ಷಿಣ ರಾಜ್ಯವಾದ ಸಾಂತಾ ಕ್ಯಾಟರಿನಾದಲ್ಲಿ ನಡೆದಿದೆ. ತಾಂತ್ರಿಕ ದೋಷ ಕಾಣಿಸಿಕೊಂಡ ಪರಿಣಾಮ , ವಿಮಾನವನ್ನು ನೂರಾರು ವಾಹನಗಳು ಓಡಾಡುವ ರಸ್ತೆಯಲ್ಲಿ ತುರ್ತು ಭೂಸ್ಪರ್ಶ ಮಾಡಲಾಯಿತು. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಎಂಜಿನ್ ವೈಫಲ್ಯದಿಂದಾಗಿ ಜನನಿಬಿಡ ರಸ್ತೆಯಲ್ಲಿ ತುರ್ತು ಭೂಸ್ಪರ್ಶ ಮಾಡಬೇಕಾಯಿತು.