ಕೆರೆಯಲ್ಲಿ ಕಳೆದುಕೊಂಡಿದ್ದ ಚಿನ್ನದ ಸರವನ್ನು ಹುಡುಕಿ ವಾರಸುದಾರರಿಗೆ ಒಪ್ಪಿಸಿದ ಈಶ್ವರ್ ಮಲ್ಪೆ

ಕಾರ್ಕಳದ ರಾಮಸಮುದ್ರ ಕೆರೆಯಲ್ಲಿ ಕಳೆದುಕೊಂಡಿದ್ದ ಅಮೂಲ್ಯ ಚಿನ್ನದ ಸರವನ್ನು ಹುಡುಕಿ ವಾರಿಸುದಾರರಿಗೊಪ್ಪಿಸಿದ ಆಪತ್ಭಾಂಧವ ಈಶ್ವರ್ ಮಲ್ಪೆ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇಲ್ಲಿನ ಇತಿಹಾಸ ಪ್ರಸಿದ್ಧ ರಾಮಸಮುದ್ರ ಕೆರೆಯಲ್ಲಿ ತನ್ನ ಗೆಳೆಯರೊಂದಿಗೆ ಮೀನು ಹಿಡಿಯಲು ಹೋಗಿದ್ದ ನಿತಿನ್ ಎಂಬ ಯುವಕ ತನ್ನ ಕತ್ತಿನಲ್ಲಿದ್ದ ಬೆಲೆಬಾಳುವ ಚಿನ್ನದ ಸರವನ್ನು ಕಳೆದುಕೊಂಡಿದ್ದರು.