‘ದರ್ಶನ್ ಸಾಕು ನಾಯಿ ಕಚ್ಚಿದರೂ ಅವರ ಮನೆಯವರು ಯಾರೂ ಸಹಾಯಕ್ಕೆ ಬಂದಿಲ್ಲ’; ಮಹಿಳೆಯ ಅಸಮಾಧಾನ

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಸಾಕಿದ್ದ ಶ್ವಾನಗಳು ಅಮಿತಾ ಜಿಂದಾಲ್ ಎಂಬ ಮಹಿಳೆಗೆ ಕಚ್ಚಿವೆ. ಈ ಸಂಬಂಧ ಪೊಲೀಸ್ ಠಾಣೆಯಲ್ಲಿ ಮಹಿಳೆ ದೂರು ನೀಡಿದ್ದಾರೆ. ಇದರಲ್ಲಿ ದರ್ಶನ್ ಹೆಸರನ್ನು ಕೂಡ ಅವರು ಉಲ್ಲೇಖ ಮಾಡಿದ್ದಾರೆ. ಈ ಪ್ರಕರಣದಲ್ಲಿ ಎಫ್ಐಆರ್ ದಾಖಲು ಮಾಡಿದ್ದಾರೆ ಪೊಲೀಸರು. ‘ಉದ್ದೇಶಪೂರ್ವಕವಾಗಿ ನಾಯಿಗಳನ್ನು ಬಿಡಲಾಗಿದೆ. ನಾಯಿ ಕಚ್ಚಿದರೂ ಯಾರೂ ಸಹಾಯಕ್ಕೆ ಬಂದಿಲ್ಲ. ನನ್ನ ಹೊಟ್ಟೆ ಭಾಗದಲ್ಲಿ ರಕ್ತ ಬರುತ್ತಿತ್ತು. ಇಂಜೆಕ್ಷನ್ ತೆಗೆದುಕೊಂಡುಬಿಡಿ ಸರಿ ಆಗುತ್ತದೆ ಎಂದು ಮನೆಯ ಸ್ಟಾಫ್ ಹೇಳಿದರು’ ಎಂದಿದ್ದಾರೆ ಅಮಿತಾ.