ಪಾಕಿಸ್ತಾನದ ಜೊತೆಗಿನ ಉದ್ವಿಗ್ನತೆ ಬೆನ್ನಲ್ಲೇ ಭಾರತೀಯ ಸೇನೆಯಿಂದ ಅಗ್ನಿವೀರರಿಗೆ ಕಠಿಣ ತರಬೇತಿ

ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನತೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಇನ್ನಷ್ಟು ಸೈನಿಕರ ಅವಶ್ಯಕತೆ ಇರುವುದರಿಂದ ಭಾರತೀಯ ಸೇನೆ ವೈಮಾನಿಕ ದಾಳಿಯನ್ನು ತಡೆಯಲು ಅಗ್ನಿವೀರರಿಗೆ ತರಬೇತಿ ನೀಡುತ್ತಿದೆ. ಪ್ರತಿಕೂಲ ವೈಮಾನಿಕ ವಸ್ತುವಿನಿಂದ ಬರುವ ಬೆದರಿಕೆಯನ್ನು ತಡೆಯಲು ಅವರ ಕೌಶಲ್ಯಗಳನ್ನು ಹೆಚ್ಚಿಸಲಾಗುತ್ತಿದೆ. ಅದರ ವಿಡಿಯೋವನ್ನು ರಕ್ಷಣಾ ಇಲಾಖೆ ಹಂಚಿಕೊಂಡಿದೆ.