ನಟ ದುನಿಯಾ ವಿಜಯ್ ಅವರು ಹಲವು ಸಿನಿಮಾಗಳನ್ನು ಮಾಡಿ ಫೇಮಸ್ ಆಗಿದ್ದಾರೆ. ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಕಳೆದ ವರ್ಷ ರಿಲೀಸ್ ಆದ ‘ಸಲಗ’ ಸಿನಿಮಾ ಯಶಸ್ಸು ಕಂಡಿತು. ಈಗ ‘ಭೀಮ’ ಚಿತ್ರದ ಕೆಲಸದಲ್ಲಿ ಅವರು ಬ್ಯುಸಿ ಆಗಿದ್ದಾರೆ. ಈ ಮಧ್ಯೆ ಅಭಿಮಾನಿಗಳನ್ನು ಅವರು ಮರೆತಿಲ್ಲ. ಇತ್ತೀಚೆಗೆ ಅಭಿಮಾನಿಯ ಆಟೋ ಹಿಂಭಾಗದಲ್ಲಿ ಅವರು ಆಟೋಗ್ರಾಫ್ ಹಾಕಿದ್ದಾರೆ. ಆಟೋ ಹಿಂಭಾಗದಲ್ಲಿ ದುನಿಯಾ ವಿಜಯ್ ಫೋಟೋ ಇತ್ತು ಅನ್ನೋದು ವಿಶೇಷ.