ಸಂವಿಧಾನ ಬದಲಾವಣೆ ಆದ್ರೆ ನನ್ನ ತಲೆ ಕತ್ತರಿಸಿ

ಬಿಜೆಪಿ ಸಂಸದ ಅನಂತಕುಮಾರ್​ ಹೆಗಡೆ ತಮ್ಮ ವಿವಾದಾತ್ಮಕ ಹೇಳಿಕೆಗಳಿಂದ ಹೆಚ್ಚು ಖ್ಯಾತಿ ಪಡೆದಿದ್ದಾರೆ. ಇವರ ಸಂವಿಧಾನ ಬದಲಾವಣೆ ಹೇಳಿಕೆ ಬಿಜೆಪಿಗೆ ಮುಳುವಾಗಿದೆ. ಕಾಂಗ್ರೆಸ್​ಗೆ ಅಸ್ತ್ರವಾಗಿದೆ. ಸಂವಿಧಾನ ಬದಲಾವಣೆ ಹೇಳಕೆ ವಿಚಾರವಾಗಿ ಬಿಜೆಪಿ ಶಾಸಕ ಡಾ. ಶಿವರಾಜ್​ ಪಾಟೀಲ್​ ಮಾತನಾಡಿ, ರಾಮಲಿಂಗೇಶ್ವರ ದೇವರ ಮೇಲೆ ಆಣೆ ಮಾಡಿ ಹೇಳುತ್ತೇನೆ ನಾವು ಸಂವಿಧಾನ ಬದಲಾವಣೆ ಮಾಡುವುದಿಲ್ಲ ಎಂದು ಹೇಳಿದ್ದಾರೆ.