ರಾಮ್ ಚರಣ್ ಮಗಳ ನೋಡಲು ಆಸ್ಪತ್ರೆ ಎದುರು ನೆರೆದ ಅಭಿಮಾನಿಗಳ ದಂಡು

ರಾಮ್ ಚರಣ್ ಹಾಗೂ ಉಪಾಸನಾ ಅವರು ತಂದೆ-ತಾಯಿ ಆಗಿದ್ದಾರೆ. ಇಂದು (ಜೂನ್ 20) ಮುಂಜಾನೆ ಉಪಾಸನಾಗೆ ಮಗಳು ಹುಟ್ಟಿದ್ದಾಳೆ. ಉಪಾಸನಾ ಹಾಗೂ ಮಗಳು ಆರೋಗ್ಯವಾಗಿದ್ದಾರೆ ಎಂದು ಕುಟುಂಬದ ಮೂಲಗಳು ಹೇಳಿವೆ. ಖಾಸಗಿ ಆಸ್ಪತ್ರೆಯ ಹೊರ ಭಾಗದಲ್ಲಿ ರಾಮ್ ಚರಣ್ ಫ್ಯಾನ್ಸ್ ನೆರೆದಿದ್ದಾರೆ. ಚಿರಂಜೀವಿ ಅವರು ಮುಂಜಾನೆಯೇ ಆಸ್ಪತ್ರೆಗೆ ಭೇಟಿ ನೀಡಿ ಮನೆಗೆ ತೆರಳಿದ್ದಾರೆ.