ಉಪ ಲೋಕಾಯುಕ್ತರ ನೇತೃತ್ವದಲ್ಲಿ ಎಪಿಎಂಸಿ ಮಾರುಕಟ್ಟೆಗೆ ದಾಳಿ

ಕೋಲಾರ ಎಪಿಎಂಸಿಯಲ್ಲಿ ಅಕ್ರಮಗಳು ನಡೆಯುತ್ತಿವೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಸೋಮವಾರ ಬೆಳ್ಳಂಬೆಳಗ್ಗೆ ಉಪಲೋಕಾಯುಕ್ತರು ದಾಳಿ ನಡೆಸಿದ್ದಾರೆ. ರೈತರು ತರುವ ತರಕಾರಿಗಳಿಗೆ ಶೇ 8ರಷ್ಟು ಕಮಿಷನ್ ಪಡೆಯುವ, 3 ರಿಂದ 5 ಕೆಜಿ ತರಕಾರಿ ಕಡಿತಗೊಳಿಸುವ ಬಗ್ಗೆ ರೈತರ ಆರೋಪದ ಕಾರಣ ಈ ದಾಳಿ ನಡೆದಿದೆ.