ಗೃಹ ಸಚಿವ ಜಿ ಪರಮೇಶ್ವರ್

ಬಿಜೆಪಿ ಆಂತರಿಕ ವಿಷಯಗಳ ಬಗ್ಗೆ ತಾನು ಕಾಮೆಂಟ್ ಮಾಡಲ್ಲ, ಆ ಪಕ್ಷದ ನಾಯಕರು ಅದನ್ನು ನೋಡಿಕೊಳ್ಳುತ್ತಾರೆ ಮತ್ತು ಕ್ರಮ ಜರುಗಿಸುತ್ತಾರೆ ಎಂದು ಪರಮೇಶ್ವರ್ ಹೇಳಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿರೋಧ ಪಕ್ಷವು ವಾಚ್ ಡಾಗ್ ರೀತಿಯಲ್ಲಿ ಕೆಲಸ ಮಾಡಬೇಕು, ಬಿಜೆಪಿಗೆ ಆ ಸ್ಥಾನಮಾನ ಸಿಕ್ಕಿದೆ, ಅವರು ನೀಡುವ ಸಲಹೆ ಸೂಚನೆಗಳನ್ನು ಸಕಾರಾತ್ಮಕವಾಗಿ ಸ್ವೀಕರಿಸಲಾಗುವುದು ಎಂದು ಪರಮೇಶ್ವರ್ ಹೇಳಿದರು.