ಬೆಂಗಳೂರು ಏರ್ಪೋರ್ಟ್ ಬಳಿ ಮಳೆ

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇರುವ ದೇವನಹಳ್ಳಿ ತಾಲೂಕಿನಲ್ಲಿ ಮೇ 6, ಸೋಮವಾರದಂದು ಮಳೆ ಸುರಿದಿದೆ. ಸುಮಾರು 40 ಡಿಗ್ರಿಯಷ್ಟು ಉಷ್ಣಾಂಶದಿಂದ ಬೇಯುತ್ತಿದ್ದ ದೇವನಹಳ್ಳಿ ನೆಲಕ್ಕೆ ಮಳೆರಾಯ ತಂಪು ತಂದಿದ್ದಾನೆ. ಜನರ ಮೊಗದಲ್ಲಿ ಮಂದಹಾಸ ಮೂಡಿದೆ. ಇನ್ನೂ ಕೆಲ ದಿನ ಮಳೆ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ.