ಹಾವೇರಿ: ಸವಣೂರು ಪಟ್ಟಣದ ಶ್ರೀದೊಡ್ಡಹುಣಸೆ ಕಲ್ಮಠದ ಆವರಣದಲ್ಲಿದ್ದ ಐತಿಹಾಸಿ ದೊಡ್ಡ ಹುಣಸೆ ಮರ (tamarind tree) ಧರಾಶಾಹಿ ಆಗಿದೆ. ನೂರಾರು ವರ್ಷಗಳ ಹಿಂದೆ ಘೋರಖನಾಥ ತಪಸ್ವಿಗಳು 3 ಗಿಡಗಳನ್ನು ನೆಟ್ಟಿದ್ದರು ಎಂಬ ಮಾಹಿತಿ ಇದೆ. ಶ್ರೀ ಮಠದಲ್ಲಿ ಒಟ್ಟು ಮೂರು ದೊಡ್ಡ ಹುಣಸೆ ಮರಗಳಿವೆ. ಆ ಪೈಕಿ ಇಂದು ಒಂದು ಮರ ಧರೆಗೆ ಉರುಳಿದೆ. ಸ್ಥಳಕ್ಕೆ ಅರಣ್ಯ ಹಾಗೂ ಕೃಷಿ ಇಲಾಖೆ ಅಧಿಕಾರಿಗಳು ಭೇಟಿ ನೀಡಿದ್ದು, ಮರವನ್ನು ಮತ್ತೆ ಯಥಾವತ್ತಾಗಿ ನೆಡಲು ಚಿಂತನೆ ನಡೆಸಿದ್ದಾರೆ.