ಡ್ರೆಸಿಂಗ್ ರೂಮಲ್ಲಿ ಆಟಗಾರರನ್ನು ಸಂತೈಸುತ್ತಿರುವ ಪ್ರಧಾನಿ ನರೇಂದ್ರ ಮೋದಿ

ಪ್ರಧಾನಿ ಅಲ್ಲಿಗೆ ಹೋಗಿದ್ದೂ ಅಲ್ಲದೆ, ಎಲ್ಲ ಆಟಗಾರರನ್ನು ಹೆಸರಿನಿಂದ ಕರೆದು, ಅವರ ತಲೆ ಮತ್ತು ಬೆನ್ನು ನೇವರಿಸಿ ಸಂತೈಸಿ ಬತ್ತಿ ಹೋಗಿದ್ದ ಚೇತನವನ್ನು ಬಡಿದೆಬ್ಬಿಸಿದ್ದಾರೆ. ಮೊದಲಿಗೆ ಅವರು ತಂಡದ ನಾಯಕ ರೋಹಿತ್ ಶರ್ಮ ಮತ್ತು ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿಯ ಕೈಗಳನ್ನು ಹಿಡಿದು, ಹತ್ತತ್ತು ಮ್ಯಾಚ್ ಗಳನ್ನು ನೀವು ಗೆದ್ದಿದ್ದೀರಿ, ಇಡೀ ದೇಶ ನಿಮ್ಮ ಕಡೆ ಗರ್ವದಿಂದ ನೋಡುತ್ತಿದೆ, ಕ್ರೀಡೆಯಲ್ಲಿ ಸೋಲು ಗೆಲುವು ಇದ್ದಿದ್ದೇ, ಚಿಂತೆ ಬೇಡ, ಉದಾಸೀನರಾಗಬೇಡಿ ಅಂತ ಹೇಳುತ್ತಾರೆ.