‘ರಾಯರ ಬಳಿ ಹಣ ಕೇಳಬಾರದು, ಜ್ಞಾನ ಕೇಳಬೇಕು’; ಜಗ್ಗೇಶ್

ಬೆಂಗಳೂರಿನ ಸೀತಾಪತಿ ಅಗ್ರಹಾರದಲ್ಲಿರುವ ನಂಜನಗೂಡು ಶ್ರೀ ರಾಘವೇಂದ್ರ ಮಠದಲ್ಲಿ ರಾಯರ 352ನೇ ಆರಾಧನಾ ಮಹೋತ್ಸವ ನಡೆಯುತ್ತಿದೆ. ಇದಕ್ಕೆ ಜಗ್ಗೇಶ್ ಅವರು ಚಾಲನೆ ನೀಡಿದ್ದಾರೆ. ಜಗ್ಗೇಶ್ ಅವರು ರಾಯರ ಭಕ್ತರು. ಅವರು ಆಗಾಗ ಮಂತ್ರಾಲಯಕ್ಕೂ ಬೇಟಿ ನೀಡುತ್ತಾರೆ. ಈಗ ಅವರು ರಾಯರಿಗೆ ಪೂಜೆ ಸಲ್ಲಿಸಿದ್ದಾರೆ. ಈ ವೇಳೆ ಅವರು ಟಿವಿ9 ಕನ್ನಡದ ಜೊತೆ ಮಾತನಾಡಿದ್ದಾರೆ. ‘ರಾಯರ ಬಳಿ ಯಾವಾಗಲೂ ಹಣ ಕೇಳಬಾರದು, ಜ್ಞಾನ ಕೇಳಬೇಕು. ಆ ಜ್ಞಾನದಲ್ಲೇ ಎಲ್ಲವೂ ಅಡಗಿದೆ’ ಎಂದಿದ್ದಾರೆ ಜಗ್ಗೇಶ್.