ಮಾಧ್ಯಮಗಳೊಂದಿಗೆ ಮಾತಾಡಿದ ಸರ್ಜನ್ ಡಾ ನಿತಿನ್ ಡಾಂಗೆ, ನಟ ಸೈಫ್ ಅವರಿಗೆ ಥೊರ‍್ಯಾಸಿಕ್ ಸ್ಪೈನಲ್ ಕಾರ್ಡ್ ಬಳಿ ಗಂಭೀರಸ್ವರೂಪದ ಇರಿತದ ಗಾಯವಾಗಿತ್ತು, ಆ ಭಾಗದಲ್ಲಿ ಸಿಕ್ಕಿಕೊಂಡಿದ್ದ ಚಾಕುವಿನ ತುಣುಕನ್ನು ಸರ್ಜರಿ ಮೂಲಕ ತೆಗೆಯಲಾಗಿದೆ ಮತ್ತು ಸ್ಪೈನಲ್ ಫ್ಲೂಯಿಡ್ ಸೋರುವಿಕೆಯನ್ನು ನಿಲ್ಲಿಸಲಾಗಿದೆ, ಕುತ್ತಿಗೆ ಮೇಲಿದ್ದ ಮತ್ತೆರಡು ಆಳದ ಗಾಯಗಳನ್ನು ಪ್ಲಾಸ್ಟಿಕ್ ಸರ್ಜನ್ಗಳು ದುರಸ್ತಿ ಮಾಡಿದ್ದಾರೆ, ಅವರ ಅರೋಗ್ಯವೀಗ ಸ್ಥಿರವಾಗಿದೆ ಮತ್ತು ಅಪಾಯದಿಂದ ಪಾರಾಗಿದ್ದಾರೆ ಎಂದು ಹೇಳಿದರು.