ಈ ಕಾರ್ಯಕ್ರಮ ನಡೆಯುತ್ತಿರುವ ದಿನದಂದೇ ಅಪ್ಪು ಅವರ 50ನೇ ಜನ್ಮದಿನವಾಗಿದ್ದು, ಅಗಲಿದ ಮಹಾನ್ ಚೇತನಕ್ಕೆ ಆರ್ಸಿಬಿ ವಿಶೇಷ ಗೌರವವನ್ನು ಸಲ್ಲಿಸಿತು. ಇನ್ನು ಕಾರ್ಯಕ್ರಮದಲ್ಲಿ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಸಹ ಹಾಜರಿದ್ದರು. ಇದೇ ವೇಳೆ ಗಾಯಕ ವಿಜಯಪ್ರಕಾಶ್ ಅವರು ರಾಜ್ಕುಮಾರ ಚಿತ್ರದ ಬೊಂಬೆ ಹೇಳುತೈತೆ ಮತ್ತೆ ಹೇಳುತೈತೆ ಗೀತೆಯನ್ನು ಹಾಡುವ ಮೂಲಕ ಅಭಿಮಾನಿಗಳನ್ನು ರಂಜಿಸಿದರು.