ಮನೆ ಮಂದಿಗೆ ಶಾಕ್ ಕೊಟ್ಟ ಕಿಚ್ಚ ಸುದೀಪ್, ಬಚ್ಚಿಟ್ಟುಕೊಂಡ ಹನುಮಂತ

ಬಿಗ್​ಬಾಸ್ ಕನ್ನಡದ ಭಾನುವಾರದ ಎಪಿಸೋಡ್ ಬಂದಿದೆ. ಭಾನುವಾರದ ಎಪಿಸೋಡ್​ ಸಾಮಾನ್ಯವಾಗಿ ತಮಾಷೆಯಿಂದ, ಹಾಸ್ಯದಿಂದ ಕೂಡಿರುತ್ತದೆ. ಆದರೆ ಸುದೀಪ್, ಮನೆ ಮಂದಿಗೆ ಶಾಕ್ ನೀಡಿದ್ದಾರೆ. ಶಾಕ್ ಎಂದರೆ ಮಾತಿನ ಶಾಕ್ ಅಥವಾ ನಕಲಿ ಶಾಕ್ ಅಲ್ಲ ಬದಲಿಗೆ ನಿಜವಾದ ಕರೆಂಟ್ ಶಾಕ್ ಕೊಟ್ಟಿದ್ದಾರೆ. ಸುದೀಪ್​ರ ಈ ಶಾಕ್​ ಟ್ರೀಟ್​ಮೆಂಟ್​ನಿಂದ ಮನೆಯವರೆಲ್ಲ ಒದ್ದಾಡಿದ್ದಾರೆ.