ಚಲಿಸುತ್ತಿದ್ದ ರೈಲಿನಿಂದ ಹಾರಿದ ಮಹಿಳೆಯ ಜೀವ ಉಳಿಸಿದ ರೈಲ್ವೆ ಪೊಲೀಸ್

ಅದಾಗಲೇ ರೈಲು ಬಂದು ನಿಂತಿತ್ತು ಮಹಿಳೆ ರೈಲು ಹತ್ತಿದ್ದರು ಆದರೆ ಮಕ್ಕಳು ಪ್ಲಾಟ್​ಫಾರ್ಮ್​ನಲ್ಲಿಯೇ ಉಳಿದಿದ್ದರು, ರೈಲು ಹೊರಟಿತ್ತು, ಮಕ್ಕಳು ಅಲ್ಲೇ ಇರುವುದ ನೋಡಿ ಮಹಿಳೆ ರೈಲಿನಿಂದ ಕೆಳಗೆ ಜಿಗಿದಿದ್ದಾರೆ, ಆಯತಪ್ಪಿ ರೈಲು ಹಾಗೂ ಪ್ಲಾಟ್​ಫಾರ್ಮ್​ ನಡುವೆ ಸಿಲುಕಿಕೊಂಡಿದ್ದಾರೆ. ಕೂಡಲೇ ರೈಲ್ವೆ ಪೊಲೀಸ್ ಆಕೆಯನ್ನು ರಕ್ಷಿಸಿರುವ ವಿಡಿಯೋ ವೈರಲ್ ಆಗಿದೆ.