‘ದಯವಿಟ್ಟು ತಗಲ್ಲಾಕ್ಕೋಬೇಡಿ’; ಇಬ್ಬರ ಮಧ್ಯೆ ದ್ವೇಷ ಬೆಳೆಸಲು ಬಂದವರಿಗೆ ಧ್ರುವ ಸರ್ಜಾ ವಾರ್ನಿಂಗ್

ಧ್ರುವ ಸರ್ಜಾ (Dhruva Sarja) ಹಾಗೂ ದರ್ಶನ್ ಮಧ್ಯೆ ಯಾವುದೂ ಸರಿ ಇಲ್ಲ ಅನ್ನೋದು ಇತ್ತೀಚೆಗೆ ಸ್ಪಷ್ಟವಾಗಿತ್ತು. ಕಾವೇರಿ ಬಂದ್ ದಿನ ನಡೆದ ಪ್ರತಿಭಟನೆಯಲ್ಲಿ ದರ್ಶನ್ ಹಾಗೂ ಧ್ರುವ ಸರ್ಜಾ ಒಟ್ಟಾಗಿ ಕಾಣಿಸಿಕೊಂಡರೂ ಪರಸ್ಪರ ಮಾತನಾಡಿಕೊಳ್ಳಲಿಲ್ಲ. ಹೀಗೇಕೆ ಎನ್ನುವ ಪ್ರಶ್ನೆ ಅನೇಕರಲ್ಲಿತ್ತು. ಮನಸ್ತಾಪ ಇರುವ ವಿಚಾರವನ್ನು ಧ್ರುವ ಸರ್ಜಾ ಪರೋಕ್ಷವಾಗಿ ಒಪ್ಪಿಕೊಂಡಿದ್ದಾರೆ.