ರಾಮನವಮಿ ದಿನವೇ ರಾಮೇಶ್ವರಂನಲ್ಲಿ ಪ್ರಧಾನಿ ಮೋದಿ ಪಂಬನ್ ರೈಲ್ವೆ ಸೇತುವೆಗೆ ಚಾಲನೆ ನೀಡಿದ್ದಾರೆ. ಪಂಬನ್-ರಾಮೇಶ್ವರಂ ನಡುವೆ ಸಂಪರ್ಕ ಕಲ್ಪಿಸುವ ವರ್ಟಿಕಲ್ ಲಿಫ್ಟ್ ಸೇತುವೆ ಇದಾಗಿದೆ. ರಾಮೇಶ್ವರಂ-ಚೆನ್ನೈನ ತಂಬರಂಗೆ ಸಂಪರ್ಕಿಸುವ ಹೊಸ ರೈಲು ಸೇವೆ ಹಾಗೂ ಕರಾವಳಿ ಕಾವಲು ಪಡೆ ಹಡಗಿಗೆ ಮೋದಿ ಚಾಲನೆ ನೀಡಲಿದ್ದಾರೆ. ಈ ಸೇತುವೆಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಲಾಗಿದೆ. ಸಮುದ್ರ ಮಾರ್ಗದಲ್ಲಿ ಹಡಗುಗಳ ಸಂಚಾರ ವೇಳೆ ಮೇಲಕ್ಕೆ ಎತ್ತಲ್ಪಡುವ ಸೇತುವೆ ಇದಾಗಿದೆ.