ಹೆಚ್ ಡಿ ಕುಮಾರಸ್ವಾಮಿ

ನಮ್ಮನ್ನು ಸಭೆಗೆ ಕರೆಸಿ ಕಾಫಿ, ಬಾದಾಮಿ ಕೊಟ್ಟರೆ ಕಾವೇರಿ ನದಿ ನೀರಿನ ಸಮಸ್ಯೆ ಬಗೆಹರಿಯದು ಎಂದ ಕುಮಾರಸ್ವಾಮಿ, ರಾಜ್ಯದಲ್ಲಿ 7 ಜನ ನಿವೃತ್ತ ಅಡ್ವೋಕೇಟ್ ಜನರಲ್ ಗಳಿದ್ದಾರೆ, ಹಲವಾರು ನಿವೃತ್ತ ನ್ಯಾಯಾಧೀಶರಿದ್ದಾರೆ, ಸರ್ಕಾರ ಅವರೊಂದಿಗೆ ಚರ್ಚೆ ನಡೆಸಿ ಪರಿಹಾರ ಕಂಡುಕೊಳ್ಳಬೇಕು ಅಂತ ಹೇಳಿದರು. ಶಿವಕುಮಾರ್​ ಗೆ ಬ್ರ್ಯಾಂಡ್ ಬೆಂಗಳೂರು ಸಾಕಾರಗೊಳಿಸುವುದು ಸಾಧ್ಯವಿಲ್ಲ, ಅಸಲಿಗೆ ಬೆಂಗಳೂರು ಹಾಳಾಗಿದ್ದೇ ಇವರಿಂದ ಎಂದು ಕುಮಾರಸ್ವಾಮಿ ಜರಿದರು.