ದೇವನಹಳ್ಳಿ, ಅ.7: ಲಂಡನ್ನಿಂದ ಬೆಂಗಳೂರಿಗೆ ಆಗಮಿಸುತ್ತಿದ್ದಾಗ ಮಗುವಿನ ಜನನದ ಸುದ್ದಿ ತಿಳಿದು ಚೆನ್ನೈ ಮೂಲದ ಪ್ರಯಾಣಿಕರೊಬ್ಬರು ವಿಮಾನದಲ್ಲೇ ಸಿಹಿ ಹಂಚಿ ಸಂಭ್ರಮಿಸಿದ್ದಾರೆ. ಅಷ್ಟು ಮಾತ್ರವಲ್ಲದೆ, ಮಗು ಜನನದ ವಿಷಯವನ್ನು ಸಾಮಾಜಿಕ ಜಾಲತಾಣ ಎಕ್ಸ್ನಲ್ಲಿ (ಟ್ವಿಟರ್) ಹಂಚಿಕೊಂಡ ಅನು ಬಾಲಾಜಿ ಅವರು, ವಿಮಾನದಲ್ಲಿ ಇಂಟರ್ ನೆಟ್ ಸಿಕ್ಕಿದ್ದಕ್ಕಾಗಿ ಬ್ರಿಟಿಷ್ ಏರ್ವೇಸ್ಗೆ ಧನ್ಯವಾದ ತಿಳಿಸಿದ್ದಾರೆ.