ನೋಯ್ಡಾದಲ್ಲಿ ಭಾರಿ ಬೆಂಕಿ ಅವಘಡ; 3 ಕಾರ್ಖಾನೆಗಳು ಸ್ಥಳದಲ್ಲೇ ಸುಟ್ಟು ಭಸ್ಮ

ಕಾರ್ಖಾನೆಯಲ್ಲಿ ಮಧ್ಯಾಹ್ನ 1.30ರ ಸುಮಾರಿಗೆ ಬೆಂಕಿ ಕಾಣಿಸಿಕೊಂಡಿದ್ದು, ದೂರದಿಂದಲೇ ಹೊಗೆ ಹೊರಬರುತ್ತಿರುವುದು ಕಂಡುಬಂದಿದೆ. ಇಲ್ಲಿಯವರೆಗೆ ಯಾವುದೇ ಸಾವು ನೋವು ಸಂಭವಿಸಿಲ್ಲ ಮತ್ತು ಯಾರೂ ಒಳಗೆ ಸಿಲುಕಿಕೊಂಡಿಲ್ಲ. ಈ ಘಟನೆಯ ವೀಡಿಯೊಗಳು ಸ್ಥಳದಿಂದ ದಟ್ಟ ಕಪ್ಪು ಬಣ್ಣದ ಹೊಗೆ ಹೊರಬರುತ್ತಿರುವುದನ್ನು ತೋರಿಸಿವೆ.