ಇತ್ತೀಚಿಗೆ ಮದುವೆ ಅಂದ್ರೆ ಡಿಜೆ, ಡ್ಯಾನ್ಸ್ ಇರೋದು ಕಾಮನ್.. ಆದ್ರೆ, ಈ ಎಲ್ಲ ಆಡಂಬರಗಳ ನಡುವೆ... ನಾವೆಲ್ಲ ಹಳೇ ಸಂಪ್ರದಾಯವನ್ನೇ ಮರೆತು ಬಿಟ್ಟಿದ್ದೇವೆ.. ಅಂತದರಲ್ಲಿ ಇಲ್ಲೊಬ್ಬ ಯುವ ರೈತ ತನ್ನ ಮದುವೆಯನ್ನು ದಶಕಗಳ ಸಂಪ್ರದಾಯವನ್ನೇ ಅನುಸರಿಸಿ ಮದುವೆಯಾಗಿದ್ದಾನೆ.. ಧಾರವಾಡ ಜಿಲ್ಲೆಯ ಹುಬ್ಬಳ್ಳಿ ತಾಲ್ಲೂಕಿನ ಬ್ಯಾಹಟ್ಟಿ ಗ್ರಾಮದ ಪ್ರವೀಣ ಹಾಗೂ ಗದಗ ಜಿಲ್ಲೆಯ ಅಂತೂರ ಬೆಂತೂರ ಗ್ರಾಮದ ವಿದ್ಯಾ ಎಂಬ ನವಜೋಡಿಗಳು ತಮ್ಮ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ.