ಸಿದ್ದರಾಮಯ್ಯ ಮತ್ತು ಸಚಿವರು ಬೆಂಗಳೂರಿನಿಂದ ವಿಶೇಷ ವಿಮಾನವೊಂದರಲ್ಲಿ ಹೊರಟು ಬಳ್ಳಾರಿ ಜಿಲ್ಲೆಯ ತೋರಣ್ ಗಲ್ ನಲ್ಲಿರುವ ಜಿಂದಾಲ್ ಸಂಸ್ಥೆಯ ಏರ್ ಸ್ಟ್ರಿಪ್ ನಲ್ಲಿ ಲ್ಯಾಂಡ್ ಆಗಲಿದ್ದಾರೆ. ಅಲ್ಲಿಂದ ಚಾಪರ್ ಒಂದರ ಮೂಲಕ ಆಲಮಟ್ಟಿಗೆ ತೆರಳಲಿದ್ದಾರೆ. ಬಾಗಿನ ಅರ್ಪಿಸಿಸದ ಬಳಿಕ ಮುಖ್ಯಮಂತ್ರಿ ಕೃಷ್ಣಾ ಮೇಲ್ದಂಡೆ ಯೋಜನೆ 3ನೇ ಹಂತ ಅನುಷ್ಠಾನಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ.