ದೇಗುಲದ ಆವರಣದಲ್ಲಿ ಸಂಸದ ಪ್ರಜ್ವಲ್ ರೇವಣ್ಣ

ಹಾಸನಾಂಬೆ ದರ್ಶನಕ್ಕೆ ಲಕ್ಷಾಂತರ ಜನ ಬರ್ತಾರೆ ಅಂತ ಗೊತ್ತಿದ್ದೂ, ಸಂಸದ, ಶಾಸಕ ಜಿಲ್ಲಾಡಳಿತ ಮತ್ತು ಎಲ್ಲಕ್ಕೂ ಮಿಗಿಲಾಗಿ ಜಿಲ್ಲಾ ಉಸ್ತುವಾರಿ ಕೆಎನ್ ರಾಜಣ್ಣ ಸರಿಯಾದ ವ್ಯವಸ್ಥೆಗಳನ್ನು ಮಾಡದೆ ಹೋಗಿದ್ದು ಅಪರಾಧವಲ್ಲದೆ ಮತ್ತೇನೂ ಅಲ್ಲ. ಕುಂಭಮೇಳ ಮತ್ತು ಬೇರೆ ಧಾರ್ಮಿಕ ಉತ್ಸವಗಳಲ್ಲಿ ನೂಕುನುಗ್ಗಲು, ಕಾಲ್ತುಳಿತದ ಘಟನೆ ಸಂಭವಿಸಿ ನೂರಾರು ಜನ ಪ್ರಾಣ ಕಳೆದುಕೊಳ್ಳುವುದನ್ನು ನಾವು ಆಗಾಗ ನೋಡುತ್ತಿರುತ್ತೇವೆ.