‘ಬಿಗ್ ಬಾಸ್ ಕನ್ನಡ ಸೀಸನ್ 10’ ರಿಯಾಲಿಟಿ ಶೋ ಈಗ ರೋಚಕ ಹಂತವನ್ನು ತಲುಪಿದೆ. ಕಿಚ್ಚ ಸುದೀಪ್ ಅವರು ಕೆಸಿಸಿ ಪಂದ್ಯಗಳಲ್ಲಿ ಬ್ಯುಸಿ ಇರುವ ಕಾರಣದಿಂದ ಈ ವಾರ ಬಿಗ್ ಬಾಸ್ ಶೋ ನಿರೂಪಣೆ ಮಾಡಲು ಸಾಧ್ಯವಾಗಿಲ್ಲ. ಅವರ ಬದಲು ಹಿರಿಯ ನಟಿ ಶ್ರುತಿ ಬಂದು ಶನಿವಾರದ (ಡಿ.23) ಎಪಿಸೋಡ್ ನಡೆಸಿಕೊಟ್ಟರು. ಭಾನುವಾರದ (ಡಿ.24) ಸಂಚಿಕೆಗೆ ಶೈನ್ ಶೆಟ್ಟಿ ಮತ್ತು ಶುಭಾ ಪೂಂಜಾ ಅವರು ಆಗಮಿಸಿದ್ದಾರೆ. ಅವರ ಎಂಟ್ರಿಯಿಂದಾಗಿ ಮನೆಯಲ್ಲಿ ಹೊಸ ವಾತಾವರಣ ನಿರ್ಮಾಣ ಆಗಿದೆ. ಈ ವಾರ ಎರಡು ಎಲಿಮಿನೇಷನ್ ಇದೆ ಎಂಬ ಟ್ವಿಸ್ಟ್ ಕೂಡ ನೀಡಲಾಗಿದೆ. ‘ಕಲರ್ಸ್ ಕನ್ನಡ’ ವಾಹಿನಿಯಲ್ಲಿ ಈ ಸಂಚಿಕೆ ಡಿ.24ರಂದು ರಾತ್ರಿ 9 ಗಂಟೆಗೆ ಪ್ರಸಾರ ಆಗಲಿದೆ. ‘ಜಿಯೋ ಸಿನಿಮಾ’ ಒಟಿಟಿಯಲ್ಲಿ ಉಚಿತವಾಗಿ 24 ಗಂಟೆಯೂ ಲೈವ್ ನೋಡಬಹುದು.