ಉಗ್ರರು ದಾಳಿ ನಡೆಸಿದ ಸ್ಥಳದಲ್ಲಿ ಸುಮಾರು 1,000 ಜನ ಪಹೆಲ್ಗಾಮ್ನ ಪ್ರಕೃತಿ ಸೊಬಗಿನಲ್ಲಿ ಕಳೆದುಹೋಗಿದ್ದರಂತೆ. ಕೆಲವರು ಸೆಲ್ಫೀ ತೆಗೆದುಕೊಳ್ಳುತ್ತಿದ್ದರೆ ಕೆಲವರು ಡ್ಯಾನ್ಸ್ ಮಾಡುತ್ತಿದ್ದರೆಂದು ದೊಡ್ಡಬಸಯ್ಯ ಹೇಳುತ್ತಾರೆ. ಭಯೋತ್ಪಾದಕರು ಮಿಲಿಟರಿ ಉಡುಗೆ ಧರಿಸಿದ್ದರಿಂದ ಜನರಿಗೆ ಗೊತ್ತಾಗಿಲ್ಲ. ಅವರು ಗುಂಡು ಹಾರಿಸಲಾರಂಭಿಸಿದಾಗ ಜನ ಪಟಾಕಿ ಸುಡುವ ಸದ್ದು ಅಂದುಕೊಂಡಿದ್ದರು ಎಂದು ಅವರು ಹೇಳುತ್ತಾರೆ.