ಲಾಲ್ ಬಾಗ್​ನಲ್ಲಿ ಫ್ಲವರ್ ಶೋ -ಕೆಂಗಲ್‌ ಹನುಮಂತಯ್ಯನವರ ಜೀವನದರ್ಶನ

ಬೆಂಗಳೂರಿನಲ್ಲಿರುವ ಸಸ್ಯಕಾಶಿ ಲಾಲ್ ಬಾಗ್ ನಲ್ಲಿ ಫಲಪುಷ್ಪ ಪ್ರದರ್ಶನ ಆರಂಭವಾಗಿದೆ. ನಿನ್ನೆ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವ್ರು ಫ್ಲವರ್ ಶೋ ಉದ್ಘಾಟನೆ ಮಾಡಿದ್ರು. ಈ ವೇಳೆ ತೋಟಗಾರಿಕಾ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಸೇರಿ ಹಲವರು ಉಪಸ್ಥಿತರಿದ್ರು. ವಿಧಾನಸೌಧ ಈ ಬಾರಿಯ ಫ್ಲವರ್ ಶೋ ಆಕರ್ಷಣೆ - ಲಾಲ್‌ಬಾಗ್‌ನಲ್ಲಿ ಆಯೋಜಿಸಲಾಗಿರೋ ಫ್ಲವರ್ ಶೋನಲ್ಲಿ ಈ ಬಾರಿ ವಿಧಾನಸೌಧ, ವಿಧಾನ ಸೌಧ ಮುಂದೆ ಇರುವ ಕೆಂಗಲ್ ಹನುಮಂತಯ್ಯ ನವರ ಪ್ರತಿಮೆ, ಪ್ರತಿಮೆಯ ಪಕ್ಕದಲ್ಲಿಯೇ ಇರುವ ಸತ್ಯಾಗ್ರಹ ಮಂಟಪ ಗಮನ ಸೆಳೆಯುತ್ತಿದೆ. ವಿಧಾನ ಸೌಧ ಹಾಗೂ ನಿರ್ಮಾತೃ ಕೆಂಗಲ್ ಹನುಮಂತಯ್ಯನವರ ಕಾನ್ಸೆಪ್ಟ್‌ನಲ್ಲಿ ಫ್ಲವರ್ ಶೋ ಮೂಡಿ ಬಂದಿದೆ.