ಹೆಚ್ ಡಿ ಕುಮಾರಸ್ವಾಮಿ, ಶಾಸಕ

ಸಭೆಯಲ್ಲಿ ಎಲ್ಲ ಸಾಧಕ ಬಾಧಕಗಳನ್ನು ಚರ್ಚಿಸಿದ ಬಳಿಕ ಮೈತ್ರಿಯ ಸ್ವರೂಪದ ಬಗ್ಗೆ ಒಂದು ಚಿತ್ರಣ ಸಿಗುತ್ತದೆ ಎಂದು ಕುಮಾರಸ್ವಾಮಿ ಹೇಳಿದರು. ಸೀಟು ಹೊಂದಾಣಿಕೆ ಬಗ್ಗೆ ಎರಡು ಪಕ್ಷಗಳ ನಡುವೆ ಯಾವುದೇ ಮಾತುಕತೆ ನಡೆದಿಲ್ಲ. ಕಳೆದ‌ 2 ತಿಂಗಳಲ್ಲಿ ಕಾಂಗ್ರೆಸ್ ಸರ್ಕಾರ ಕೆಟ್ಟ ಅಡಳಿತ ನೀಡಿರುವ ಹಿನ್ನೆಲೆಯಲ್ಲಿ ಒಂದು ಬಲಿಷ್ಠ ವಿರೋಧ ಪಕ್ಷದ ಅವಶ್ಯಕತೆಯನ್ನು ಬಿಜೆಪಿ ಮತ್ತು ತಮ್ಮ ಪಕ್ಷಗಳ ನಾಯಕರು ಮನಗಂಡಿದ್ದಾರೆ ಎಂದು ಕುಮಾರಸ್ವಾಮಿ ಹೇಳಿದರು.