ಹಾಸನಾಂಬೆ ದೇಗುಲದ ಮುಂದೆ ಜೆಡಿಎಸ್ ಶಾಸಕರು

ನಿನ್ನೆ ಕುಮಾರಸ್ವಾಮಿ ಅದೇ ರೆಸಾರ್ಟ್ ನಲ್ಲಿ ಒಂದು ಸುತ್ತಿನ ಸಭೆ ನಡೆಸಿದರು ಮತ್ತು ಇವತ್ತು ಎರಡನೇ ಸುತ್ತು ನಡೆಯಲಿದೆ. ರಾಜ್ಯದ ರಾಜಕೀಯ ವಲಯಗಳಲ್ಲಿ ಆಗಾಗ್ಗೆ ಚರ್ಚೆ ನಡೆಯುತ್ತಿರುವ ಹಾಗೆ ಜೆಡಿಎಸ್ ಶಾಸಕರಿಗೆ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವುದು ಬೇಕಿರಲಿಲ್ಲ. ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ, ಚರ್ಚೆ ನಡೆಸದೆ ಕುಮಾರಸ್ವಾಮಿ ದುಡುಕಿದ್ದಾರೆ ಅಂತ ಶಾಸಕರು ಅಸಮಾಧಾನಗೊಂಡಿದ್ದಾರೆ.