ಡಿಸಿಪಿ ಸೈದುಲು ಅಡಾವತ್ ಜನ ಸಂಪರ್ಕ ಸಭೆ

ಪಾರ್ಕ್ ಗಳಲ್ಲಿ ಪುಡ್ಡೆಗಳ ಪುಂಡಾಟ, ಗಾಂಜಾ ಮತ್ತು ಇದರ ಡ್ರಗ್ಸ್ ಅವ್ಯಾಹತ ಮಾರಾಟ, ರಸ್ತೆಗಳ ಬದಿಯಲ್ಲೇ ಮದ್ಯ ಸೇವನೆ, ಅಂಗಡಿಗಳ ಮುಂದೆ ಅಡ್ಡಾದಿಡ್ಡಿ ವಾಹನಗಳ ಪಾರ್ಕಿಂಗ್, ಕಳ್ಳತನ, ಸೈಬರ್ ಕ್ರೈಮ್, ಅನಧಿಕೃತ ಚೀಟಿ ವ್ಯವಹಾರ ಮೊದಲಾದ ಹತ್ತು ಹಲವು ಸಮಸ್ಯೆಗಳನ್ನು ಜನ ಹೇಳಿಕೊಂಡರು. ಡಿಸಿಪಿ ಅಡಾವಟ್ ಎಲ್ಲರ ಸಮಸ್ಯೆಗಳನ್ನು ಆಲಿಸಿ ಸೂಕ್ತ ಪರಿಹಾರಗಳನ್ನು ಒದಗಿಸುವ ಭರವಸೆ ನೀಡಿದರು.