ಬಸ್ ಎದುರು ಹೋಗಿ ಕುಳಿತ ವ್ಯಕ್ತಿ, ಏಳೋಕೆ ರೆಡಿ ಇಲ್ಲ, ಕುಡುಕನೋ, ಹುಚ್ಚನೋ ಒಂದೂ ಗೊತ್ತಿಲ್ಲ

ವ್ಯಕ್ತಿಯೊಬ್ಬ ಬಸ್ ಎದುರು ಹೋಗಿ ಕುಳಿತಿರುವ ವಿಡಿಯೋ ಇನ್​ಸ್ಟಾಗ್ರಾಂನಲ್ಲಿ ವೈರಲ್ ಆಗಿದೆ. ಆತ ಏಳುವುದಕ್ಕೆ ಸಿದ್ಧನಿರಲಿಲ್ಲ, ಕುಡುಕನೋ, ಹುಚ್ಚನೋ ಎಂದು ಗೊತ್ತಾಗದ ರೀತಿಯಲ್ಲಿ ಆತ ಇದ್ದ. ಪುಣೆ ಮಹಾನಗರ ಪರಿವಾಹನ್ ಮಹಾಮಂಡಲ್ ಲಿಮಿಟೆಡ್ ಬಸ್ ಬರುವಾಗ ಈತ ರಸ್ತೆ ಮಧ್ಯದಲ್ಲಿ ಹೋಗಿ ಕುಳಿತಿದ್ದಾನೆ. ಬಸ್ ಆತನ ಎದುರಿಗೆ ಬಂದು ನಿಂತಿದೆ. ಆದರೂ ಆತ ಏಳಲು ಸಿದ್ಧವಿರಲಿಲ್ಲ.