ಮುನಿರತ್ನರನ್ನು ದಿಢೀರ್​ ಜಯದೇವ ಆಸ್ಪತ್ರೆಗೆ ಕರೆದುಕೊಂಡು ಹೋದ ಪೊಲೀಸರು

ಗುತ್ತಿಗೆದಾರನಿಗೆ ಜೀವ ಬೆದರಿಕೆ, ಜಾತಿ ನಿಂದನೆ ಪ್ರಕರಣದಲ್ಲಿ ಬಂಧನವಾಗಿರುವ ಮುನಿರತ್ನ, ಎರಡು ದಿನದಿಂದ ಪೊಲೀಸ್ ಠಾಣೆಯಲ್ಲಿ ವಿಚಾರಣೆ ಎದುರಿಸುತ್ತಿದ್ದಾರೆ. ಇಂದು ದಿಢೀರ್ ಅವರನ್ನು​ ಜಯದೇವ ಆಸ್ಪತ್ರೆಗೆ ಪೊಲೀಸರು ಕರೆದುಕೊಂಡು ಹೋಗಿದ್ದು, ಕೆಲವು ಹೆಲ್ತ್ ಚೆಕಪ್ ಮಾಡಿದ್ದಾರೆ. ಈ ವೇಳೆ ಮುನಿರತ್ನ ಮೌನವಾಗಿದ್ದರು.