ರಾತ್ರೋರಾತ್ರಿ ಬಳ್ಳಾರಿ ಜೈಲಿನಿಂದ ಆಂಬ್ಯುಲೆನ್ಸ್​ ಮೂಲಕ ದರ್ಶನ್ ಶಿಫ್ಟ್

ಬಳ್ಳಾರಿ ಜೈಲಿನಿಂದ ದರ್ಶನ್ ಅವರನ್ನು ಶಿಫ್ಟ್ ಮಾಡಲಾಗಿದೆ. ಆಂಬ್ಯುಲೆನ್ಸ್​ ಜೈಲಿಗೆ ಬಂದಿದ್ದು, ಅದರಲ್ಲಿ ದರ್ಶನ್​ ತೆರಳಿದ್ದಾರೆ. ಅವರಿಗೆ ತೀವ್ರ ಬೆನ್ನು ನೋವು ಇದೆ. ಆ ಕಾರಣಕ್ಕಾಗಿ ಸ್ಕ್ಯಾನಿಂಗ್ ಮಾಡಿಸಲು ವಿಮ್ಸ್​ ಆಸ್ಪತ್ರೆಗೆ ಅವರನ್ನು ಕರೆದುಕೊಂಡು ಹೋಗಲಾಗಿದೆ. ಅಭಿಮಾನಿಗಳು ಆ್ಯಂಬುಲೆನ್ಸ್​ಗೆ ಅಡ್ಡ ಬರುವ ಸಾಧ್ಯತೆ ಇರುವುದರಿಂದ ಪೊಲೀಸ್ ಭದ್ರತೆ ನೀಡಲಾಗಿದೆ.