ಸಾಬರಮತಿ ಆಶ್ರಮ

ಗಾಂಧೀಜಿಯವರ ಬದುಕಿನ ಮಂತ್ರವಾಗಿದ್ದ ಸರಳತೆ ಮತ್ತು ವಾಸ್ತುವನ್ನು ಆಶ್ರಮದಲ್ಲಿ ಕಾಣಬಹುದಾಗಿತ್ತು. ಆದರೆ ಅವರು ಬದುಕಿದ್ದಾಗ 120 ಎಕರೆ ಪ್ರದೇಶದಲ್ಲಿ ಹಬ್ಬಿದ್ದ ಆಶ್ರಮವು ಕ್ರಮೇಣ ಕರಗುತ್ತಾ 5 ಎಕರೆ ಪ್ರದೇಶಕ್ಕೆ ಮಾತ್ರ ಸಂಕುಚಿತಗೊಂಡಿತು. ಅಲ್ಲಿದ್ದ 63 ಕಟ್ಟಡಗಳ ಸಂಖ್ಯೆ ಕೇವಲ 3ಕ್ಕೆ ಇಳಿಯಿತು. ದೇಶ ವಿದೇಶಗಳಿಂದ ಬರುತ್ತಿದ್ದ ಪ್ರವಾಸಿಗರಿಗೆ ಸಾಬರಮತಿ ಆಶ್ರಮದಲ್ಲಿ ಕೇವಲ ಇಷ್ಟು ಮಾತ್ರ ನೋಡಸಿಗುತಿತ್ತು