ಹಣದ ವಿಚಾರದಲ್ಲಿ ಲೀಲಾವತಿ ಎಲ್ಲರಿಗೂ ಮಾದರಿ; ಗಿರಿಜಾ ಲೋಕೇಶ್ ವಿವರಿಸಿದ್ದು ಹೀಗೆ

ಹಿರಿಯ ನಟಿ ಲೀಲಾವತಿ ಅವರು ನೆಲಮಂಗಲದ ಸೋಲದೇವನಹಳ್ಳಿಯಲ್ಲಿ ಮಗ ವಿನೋದ್ ರಾಜ್ ಜೊತೆ ವಾಸವಾಗಿದ್ದಾರೆ. ಅವರಿಗೆ ವಯೋಸಹಜ ಕಾಯಿಲೆ ಕಾಣಿಸಿಕೊಂಡಿದೆ. ಹೀಗಾಗಿ, ಎದ್ದು ನಡೆದಾಡುವುದು ಕೂಡ ಕಷ್ಟ. ಅವರನ್ನು ಚಿತ್ರರಂಗದ ಹಿರಿಯ ಕಲಾವಿದರು ಭೇಟಿ ಮಾಡಿದ್ದಾರೆ. ಈ ವೇಳೆ ಮಾತನಾಡಿದ ಗಿರಿಜಾ ಲೋಕೇಶ್, ‘ಲೀಲಾವತಿ ಅವರು ತಾವು ದುಡಿದ ಹಣವನ್ನು ಕೂಡಿಟ್ಟರು. ಅದನ್ನು ಸರಿಯಾದ ರೀತಿಯಲ್ಲಿ ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಈ ವಿಚಾರದಲ್ಲಿ ಅವರು ಎಲ್ಲರಿಗೂ ಮಾದರಿ’ ಎಂದಿದ್ದಾರೆ.