ಸ್ಪಂದನಾಗೆ ಬಹಳ ಬೇಗ ಕೋಪ ಬರುತ್ತಿತ್ತು: ಕಾರಣ ತಿಳಿಸಿದ ವಿಜಯ್​ ರಾಘವೇಂದ್ರ

ಸ್ಪಂದನಾ ವಿಜಯ್​ ರಾಘವೇಂದ್ರ ಅವರು ಹೃದಯಾಘಾತದಿಂದ ನಿಧನರಾಗಿದ್ದು ತೀವ್ರ ನೋವಿನ ಸಂಗತಿ. ಸ್ಪಂದನಾ ಇಲ್ಲದೇ ವಿಜಯ್​ ರಾಘವೇಂದ್ರ ಅವರು ಮಂಕಾದರು. ಆದರೆ ಈಗ ಅವರು ತಮ್ಮ ಕರ್ತವ್ಯದ ಕಡೆಗೆ ಗಮನ ಹರಿಸುತ್ತಿದ್ದಾರೆ. ಅವರು ನಟಿಸಿರುವ ‘ಕದ್ದ ಚಿತ್ರ’ ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. ಈ ವೇಳೆ ಅವರು ‘ಟಿವಿ9 ಕನ್ನಡ’ಕ್ಕೆ ವಿಶೇಷ ಸಂದರ್ಶನ ನೀಡಿದ್ದಾರೆ. ಪತ್ನಿ ಬಗೆಗಿನ ನೆನಪುಗಳನ್ನು ವಿಜಯ್​ ರಾಘವೇಂದ್ರ ಮೆಲುಕು ಹಾಕಿದ್ದಾರೆ. ತಮಗಿಂತಲೂ ಸ್ಪಂದನಾಗೆ ಕೋಪ ಜಾಸ್ತಿ ಇತ್ತು ಎಂದು ಅವರು ಹೇಳಿದ್ದಾರೆ. ಪತ್ನಿಯ ಕೋಪಕ್ಕೆ ಕಾರಣ ಆಗುತ್ತಿದ್ದ ಸಂಗತಿಗಳು ಏನು ಎಂಬುದನ್ನು ಕೂಡ ಅವರು ವಿವರಿಸಿದ್ದಾರೆ. ಪುತ್ರ ಶೌರ್ಯನ ಬಗ್ಗೆ ಸ್ಪಂದನಾ ಅವರು ಸಾಕಷ್ಟು ಕಾಳಜಿ ವಹಿಸುತ್ತಿದ್ದರು. ಆ ಎಲ್ಲ ವಿಚಾರಗಳ ಬಗ್ಗೆ ವಿಜಯ್​ ರಾಘವೇಂದ್ರ ಅವರು ಈ ವಿಡಿಯೋದಲ್ಲಿ ಮಾತನಾಡಿದ್ದಾರೆ.