ಹಾಸನಾಂಬೆ ಸಮ್ಮುಖದಲ್ಲಿ ಸಿದ್ದರಾಮಯ್ಯ

ಹಾಸನಾಂಬೆಯಿಂದಾಗೇ ಊರಿಗೆ ಹಾಸನ ಅಂತ ಹೆಸರು ಬಂದಿದೆಯಾ ಎಂದು ಕೇಳಿದ ಸಿದ್ದರಾಮಯ್ಯ ಇದಕ್ಕೂ ಮೊದಲೊಮ್ಮೆ ದೇವಸ್ಥಾನಕ್ಕೆ ಭೇಟಿ ನೀಡಿದ ಸಂಗತಿಯನ್ನು ಹೇಳಿದಾಗ ಅರ್ಚಕರು, ಹೌದು ನೀವು ಬಂದು ಹೋಗಿದ್ದು ನೆನಪಿದೆ ಅನ್ನುತ್ತಾರೆ. ಅಂತಿಮವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನಾಡಿನ ಎಲ್ಲ ಜನತೆಗೆ ಒಳ್ಳೆಯದಾಗಲಿ ಅಂತ ಹಾಸನಾಂಬೆಗೆ ಪ್ರಾರ್ಥನೆ ಸಲ್ಲಿಸುತ್ತಾರೆ.