‘ಸಂಜೆವರೆಗೂ ಕಾಯ್ತೀವಿ’; ರವಿಚಂದ್ರನ್ ಮನೆಮುಂದೆ ಕಾದು ನಿಂತ ಅಭಿಮಾನಿಗಳು

ನಟ, ನಿರ್ದೇಶಕ, ನಿರ್ಮಾಪಕ ವಿ. ರವಿಚಂದ್ರನ್ ಅವರು ಇಂದು (ಮೇ 30) ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿದ್ದಾರೆ. ರವಿಚಂದ್ರನ್ ಬಗ್ಗೆ ಇರೋ ಕ್ರೇಜ್ ಎಂದಿಗೂ ಕಡಿಮೆ ಆಗೋದಲ್ಲ. ಅವರ ಮನೆ ಎದುರು ಅಭಿಮಾನಿಗಳು ನೆರೆದಿದ್ದಾರೆ. ರವಿಚಂದ್ರನ್ ಅವರು ನಿವಾಸದಲ್ಲಿ ಇಲ್ಲ ಎನ್ನಲಾಗಿದೆ. ಇದು ಅಭಿಮಾನಿಗಳಿಗೆ ಬೇಸರ ಮೂಡಿಸಿದೆ. ‘ಸಂಜೆವರೆಗೂ ಅವರಿಗಾಗಿ ಕಾಯ್ತೀವಿ’ ಎಂದು ರವಿಚಂದ್ರನ್ ಫ್ಯಾನ್ಸ್ ಹೇಳಿದ್ದಾರೆ. ರವಿಚಂದ್ರನ್ ಬರ್ತ್ಡೇ ಪ್ರಯುಕ್ತ ‘ಕೆಡಿ’ ಸಿನಿಮಾದ ಅವರ ಲುಕ್ ರಿವೀಲ್ ಆಗಿದೆ.