ಶೋಭಾಯಾತ್ರೆ ಪ್ರಯುಕ್ತ ಮಂಡ್ಯ ಕೇಸರಿಮಯ

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಹಿಂದೂಗಳು ನಿಶ್ಶಕ್ತರು ಎಂದು ಬಿಂಬಿಸುವ ಪ್ರಯತ್ನ ನಡೆಸಿದೆ, ಹಿಂದೂ ಧಾರ್ಮಿಕ ಆಚರಣೆಗಳ ಸಂದರ್ಭಗಳಲ್ಲಿ ಕಿಡಿಗೇಡಿಗಳಿಂದ ಅಡ್ಡಿಯನ್ನುಂಟು ಮಾಡುವ ಕೆಲಸ ನಡೆಯುತ್ತಿದೆ, ಹಿಂದೂಗಳು ದುರ್ಬಲರಲ್ಲ ಎಂಬ ಸಂಗತಿಯನ್ನು ಸಹ ಶೋಭಾಯಾತ್ರೆಯ ಮೂಲಕ ಸಾರುವ ನಿಶ್ಚಯವನ್ನು ಸಂಘಟಕರು ಮಾಡಿಕೊಂಡಿದ್ದಾರೆ.