ಬಾಗಲಕೋಟೆ: ಶ್ರವಣಬೆಳಗೊಳದ ಗೊಮ್ಮಟೇಶ್ವರ ದೇವಸ್ಥಾನದ 700 ಮೆಟ್ಟಿಲುಗಳನ್ನು ಹಾಗಿಯೇ ಹತ್ತುವುದು ಕಷ್ಟ. ಅಂತದರಲ್ಲಿ 125 ಕೆಜಿ ತೂಕದ ಜೋಳದ ಚೀಲ ಹೊತ್ತು ಸಾಗುವುದು ಎಂದರೆ ಇನ್ನು ಕಷ್ಟ. ಆದರೆ 41 ನಿಮಿಷದಲ್ಲಿ 125 ಕೆಜಿ ತೂಕದ ಜೋಳದ ಚೀಲ ಹೊತ್ತು ಬೆಟ್ಟದ ಹತ್ತುವ ಮೂಲಕ ವ್ಯಕ್ತಿ ಓರ್ವರು ಸಾಹಸ ಮೇರೆದಿದ್ದಾರೆ.